Index   ವಚನ - 464    Search  
 
ಕಂಥೆ ಖಟ್ವಾಂಗ ದಂಡ ಕಮಂಡಲ ಗುಂಡುಗಪ್ಪರದ ಜೋಳಿಗೆ ಕಾಮಾಕ್ಷಿ ಇವು ಪಂಚಮುದ್ರೆ ಪರಿಪೂರ್ಣಸ್ಥಲಕುಳವೆಂದು ನುಡಿದುಕೊಂಡು ನಡೆವರಯ್ಯ. ಜೀವವೆಂಬುದು ಹಾರಿ ಕಾಯವೆಂಬ ಕಂಥೆಯ ತಡೆಗೆಡೆದು ಮೆಟ್ಟಿ ಮೆಟ್ಟಿ ಹೂಳುವಲ್ಲಿ ಬಿಟ್ಟು ಹೋಹ ಪ್ರಾಣಕ್ಕೆ ಆವುದು ಕಂಥೆ? ಆವುದು ಖಟ್ವಾಂಗ? ಆವುದು ದಂಡ? ಆವುದು ಕಮಂಡಲ? ಆವುದು ಗುಂಡುಗಪ್ಪರದ ಜೋಳಿಗೆ? ಆವುದು ಕಾಮಾಕ್ಷಿ? ಈ ಸ್ಥಲಕುಳದ ನಿರ್ಣಯವ ಬಲ್ಲರೆ ಹಿರಿಯರೆಂದೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.