Index   ವಚನ - 500    Search  
 
ಆಕಾರವಿಲ್ಲದಾತಂಗೆ ಅಂಗವೆಂದೇಕೆ ಕಲ್ಪಿಸಿ ಹೇಳುವಿರಿ? ಅದು ಲಿಂಗಾನುಭಾವಿಗಳ ದೃಷ್ಟಿಯೆ? ಅಲ್ಲ. ಬಿಡಾ ಮರುಳೆ. ಮಮಕಾರವಿಲ್ಲದಾತಂಗೆ ಮಾನಿನಿಯರಿಬ್ಬರೆಂದೇನೋ? ಮಾನಿನಿಯರಿಬ್ಬರಿಲ್ಲದಾತಂಗೆ ಲೀಲಾ ಮಾಯಿಕದ ಸಂಸಾರದ ಕುರುಹೆಂದೇನೊ? ನಾಮ ನಿರ್ನಾಮನಾದ ನಿರಾಲಂಬಿಗೆ ನಾಮ ಸೀಮೆಯ ಕಲ್ಪಿಸಲುಂಟೆ? ನಿಸ್ಸೀಮಂಗೆ ನಿರ್ವಿಕಲ್ಪಿತಂಗೆ ಕಲ್ಪಿತವುಂಟೆ? ಕಲ್ಪಿತಕ್ಕೆ ತಂದು ಸತಿ ಸುತ ಸಂಸಾರವುಂಟೆಂಬ ಹೂಸಿಗರ ಮಾತ ಕೇಳಲಾಗದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.