Index   ವಚನ - 499    Search  
 
ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ ಹೇಳುವಿರಿ? ಇಬ್ಬರ ಸಂಗದಿಂದಾನೆಂಬುದು ಅಜ್ಞಾನವಲ್ಲದೆ ಅರುಹಲ್ಲ ನೋಡಾ. ಒಬ್ಬರ ಸಂಗದಿಂದಾದ ಸ್ವಸಂಗಿಗೆ ತಂದೆಯೆಂದು ಕಲ್ಪಿಸಿ ತಾಯೆಂದು ಹೇಳಲಿಲ್ಲ. ತಂದೆ ತಾಯಿಗಳಿಲ್ಲದಾತಂಗೆ ಬಂಧುಗಳೆಂದೇನೋ ಭ್ರಾಂತರಿರಾ? ಅಯೋನಿಸಂಭವನಾಗಿ ಶರಣನು ಸ್ವಯಂಭು ತಾನಾದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.