Index   ವಚನ - 546    Search  
 
ತನು ಲಿಂಗವಾದ ಬಳಿಕ ವಿಕಾರವುಂಟೆ? ಮನ ಲಿಂಗವಾದ ಬಳಿಕ ಮಾಯವುಂಟೆ ಅಯ್ಯ? ಭಾವ ಲಿಂಗವಾದ ಬಳಿಕ ಭ್ರಮೆಯುಂಟೆ? ಕಾಯ ಲಿಂಗವಾದ ಬಳಿಕ ಕಳವಳವೆಲ್ಲಿಯದೊ? ಜೀವ ಲಿಂಗವಾದ ಬಳಿಕ ಉಪಾಧಿಯುಂಟೇ ಅಯ್ಯ? ಪ್ರಾಣ ಲಿಂಗವಾದ ಬಳಿಕ ಪ್ರಳಯವಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.