Index   ವಚನ - 582    Search  
 
ಮುಂಡದಲ್ಲಿ ಹುಟ್ಟಿದ ತಲೆ ಕೆಂಡವ ಕಚ್ಚಿ ಕುಣಿದಾಡುವುದ ಕಂಡೆನಯ್ಯ. ಮುಂಡ ಬೆಂದು ತಲೆವುಳಿದು ಕೆಂಡ ಕೆದರಲಾಗಿ ಅಖಂಡ ಪರಿಪೂರ್ಣ ಪರಕ್ಕೆ ಪರನಾದ ಲಿಂಗೈಕ್ಯನನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.