Index   ವಚನ - 645    Search  
 
ಕೊರಡು ಕೊನರಾಗಬಲ್ಲುದೇ? ಬರಡು ಹಯನಾಗಬಲ್ಲುದೇ ಅಯ್ಯಾ? ಕುರುಡಗೆ ಕನ್ನಡಿಯ ತೋರಿದಡೆ ನೋಡಬಲ್ಲನೆ? ಮೂಗಗೆ ರಾಗವ ಹೇಳಿದರೆ ಹಾಡಬಲ್ಲನೆ ಅಯ್ಯ? ಹೇಗೆ ಬುದ್ಧಿಯ ಬಲ್ಲನೇ ಅಯ್ಯ? ಲೋಗರಿಗೆ ಉಪದೇಶವ ಹೇಳಿದರೆ ಶಿವಸತ್ಪಥದ ಹಾದಿಯ ಬಲ್ಲರೇ ಅಯ್ಯ? ಇದು ಕಾರಣ, ಶಿವ ಸತ್ಪಥದ ಆಗೆಂಬುದು ಶಿವಜ್ಞಾನಸಂಪನ್ನಂಗಲ್ಲದೆ ಸಾಧ್ಯವಲ್ಲ ಕಾಣ. ಅಸಾಧ್ಯವಸ್ತುವಿನೊಳಗಣ ಐಕ್ಯ ಅವಿವೇಕಗಳಿಗೆ ಅಳವಡುವುದೇ ನಮ್ಮವರಿಗಲ್ಲದೆ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.