Index   ವಚನ - 651    Search  
 
ತನುವಿನೊಳಗೆ ಲಿಂಗ, ಲಿಂಗದೊಳಗೆ ತನು. ಮನದೊಳಗೆ ಲಿಂಗ, ಲಿಂಗದೊಳಗೆ ಮನ. ಭಾವದೊಳಗೆ ಲಿಂಗ, ಲಿಂಗದೊಳಗೆ ಭಾವ. ಪ್ರಾಣದೊಳಗೆ ಲಿಂಗ, ಲಿಂಗದೊಳಗೆ ಪ್ರಾಣವಾಗಿರ್ದು, ಬೇರಿಟ್ಟು ನುಡಿವ ಭಿನ್ನಜ್ಞಾನಿಗಳಿಗೆ ಲಿಂಗವೆಲ್ಲಿಯದೊ? ಲಿಂಗವಿಲ್ಲವಾಗಿ ಪ್ರಸಾದವಿಲ್ಲ; ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ ನೋಡಾ. ಇದು ಕಾರಣ. ಭಿನ್ನಾಭಿನ್ನವನಳಿದು ನಿನ್ನೊಳಗಡಗಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.