Index   ವಚನ - 664    Search  
 
ನಿತ್ಯ ನಿಜವಸ್ತುವಿನ ಪ್ರಸನ್ನತ್ವ ಸಚ್ಚಿದಾನಂದ ಚಿದ್ಬೆಳಗು ತತ್ವಬ್ರಹ್ಮಾಂಡವ ನುಂಗಿ ತತ್ವಬ್ರಹ್ಮಾಂಡದಿಂದತ್ತತ್ತ ತಾನಾದ ನಿಶ್ಚಿಂತ ನಿರಾಳನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.