ಸವಿಕಲ್ಪ ಸತ್ತಿತ್ತು,
ನಿರ್ವಿಕಲ್ಪವೆಂಬ ಗರ್ವವಳಿದು,
ತೆರಹಿಲ್ಲದ ಮಹಾಘನದೊಳಡಗಿತ್ತಾಗಿ.
ಸಾಧ್ಯವಿಲ್ಲ, ಸಾಧಕನಿಲ್ಲ;ಪೂಜ್ಯನಿಲ್ಲ, ಪೂಜಕನಿಲ್ಲ;
ದೇವನಿಲ್ಲ, ಭಕ್ತನಿಲ್ಲ.ಇವೇನುಯೇನೂ ಇಲ್ಲವಾಗಿ
ನಾಮನಲ್ಲ, ನಿರ್ನಾಮನಲ್ಲ;ಸೀಮನಲ್ಲ, ನಿಸ್ಸೀಮನಲ್ಲ;
ಇವೇನುಯೇನೂ ಇಲ್ಲದ ಸರ್ವಶೂನ್ಯನಿರಾಲಂಬವು,
ನಿರ್ವಯಲು ನಿರಾಕಾರ ಪರವಸ್ತು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Savikalpa sattittu,
nirvikalpavemba garvavaḷidu,
terahillada mahāghanadoḷaḍagittāgi.
Sādhyavilla, sādhakanilla;pūjyanilla, pūjakanilla;
dēvanilla, bhaktanilla.Ivēnuyēnū illavāgi
nāmanalla, nirnāmanalla;sīmanalla, nis'sīmanalla;
ivēnuyēnū illada sarvaśūn'yanirālambavu,
nirvayalu nirākāra paravastu,
mahāliṅgaguru śivasid'dhēśvara prabhuvē.