Index   ವಚನ - 699    Search  
 
ಅಂಗವುಳ್ಳನ್ನಕ್ಕರ ಲಿಂಗ ಲಿಂಗವೆನುತಿರ್ದೆ. ಲಿಂಗವುಳ್ಳನ್ನಕ್ಕರ ಅಂಗ ಅಂಗವೆನುತಿರ್ದೆ. ಅಂಗ ಲಿಂಗವುಳ್ಳನ್ನಕ್ಕರ ಅರುಹು ಅರುಹುಯೆನುತಿರ್ದೆನು. ಅರುಹು ಅರುಹುಯೆಂಬನ್ನಕ್ಕರ ಭಾವ ನಿರ್ಭಾವಯೆನುತಿರ್ದೆನು. ಅಂಗ ಲಿಂಗದಲ್ಲಡಗಿ, ಲಿಂಗ ಅಂಗದಲ್ಲಡಗಿ, ಅಂಗ ಲಿಂಗವೆಂಬುಭಯ ಭಾವವರತಲ್ಲಿ ಅರುಹು ಅರುಹೆಂಬುವದು ಬರಿದಾಯಿತ್ತು ನೋಡಾ. ಅರುಹು ಅರುಹೆಂಬುವದು ಅರಿದಾದಲ್ಲಿ, ಭಾವ ನಿರ್ಭಾವ ಬಯಲಾಗಿ ಬಚ್ಚಬರಿಯ ಬಯಲೆಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.