ಮರ್ತ್ಯಲೋಕದ ಕವಿಗಳೆಲ್ಲರೂ
ಎನ್ನ ತೊತ್ತಿನ ಮಕ್ಕಳು.
ದೇವಲೋಕದ ಕವಿಗಳೆಲ್ಲರೂ
ಎನ್ನ ಕರುಣದ ಕಂದಗಳು
ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ
ಲೆಂಕ ಡಿಂಗರಿಗರು
ಹರಿ ಬ್ರಹ್ಮ ರುದ್ರ ಈ ಮೂವರೂ
ಎನ್ನ ಕಕ್ಷೆಯ ಒಕ್ಕಲು.
ಗುಹೇಶ್ವರಾ ನೀ ಮಾವ ನಾನಳಿಯ.
Transliteration Martyalōkada kavigaḷellarū
enna tottina makkaḷu.
Dēvalōkada kavigaḷellarū
enna karuṇada kandagaḷu
hinde munde āḍuva kavigaḷellarū
leṅka ḍiṅgarigaru
hari brahma rudra ī mūvarū
enna kakṣeya okkalu.
Guhēśvarā nī māva nānaḷiya.
Hindi Translation मर्त्यलोक के सब कवि मेरे सेवक के बच्चे।
देवलोक के सब कवि मेरी कृपा के बेटे। क्शा
आगे पीछे खेलते कवि भक्त, सेवक हैं।
हरि ब्रह्म,रुद् ये तीनों मेरी कक्षा के अनुयायी
गुहेश्वरा तू मामा,मैं दामाद।
Translated by: Eswara Sharma M and Govindarao B N