Index   ವಚನ - 72    Search  
 
ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ ಆಚಾರಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಸ್ವಾಧಿಷ್ಠಾನದಲ್ಲಿ ಗುರುಲಿಂಗವ ಧರಿಸಿದನಾಗಿ ಗುರುಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಮಣಿಪೂರಕದಲ್ಲಿ ಶಿವಲಿಂಗವ ಧರಿಸಿದನಾಗಿ ಶಿವಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಅನಾಹತದಲ್ಲಿ ಜಂಗಮಲಿಂಗವ ಧರಿಸಿದನಾಗಿ ಜಂಗಮಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ವಿಶುದ್ಧಿಯಲ್ಲಿ ಪ್ರಸಾದಲಿಂಗವ ಧರಿಸಿದನಾಗಿ ಪ್ರಸಾದಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಆಜ್ಞೇಯದಲ್ಲಿ ಮಹಾಲಿಂಗವ ಧರಿಸಿದನಾಗಿ ಮಹಾಲಿಂಗ ಭಕ್ತನಾದನಯ್ಯ ನಿಮ್ಮ ಶರಣ. ಇಂತು ಷಡಾಧಾರದಲ್ಲಿ ಷಡ್ವಿಧಲಿಂಗವ ಧರಿಸಿ ಷಡುಸ್ಥಲ ಭಕ್ತನಾದನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣ.