Index   ವಚನ - 1438    Search  
 
ಮಹಾಘನವೆ ತಾನಾದ ಬಳಿಕ ಪುಣ್ಯವಿಲ್ಲ-ಪಾಪವಿಲ್ಲ, ಸುಖವಿಲ್ಲ-ದುಃಖವಿಲ್ಲ ಕಾಲವಿಲ್ಲ-ಕರ್ಮವಿಲ್ಲ; ಜನನವಿಲ್ಲ-ಮರಣವಿಲ್ಲ, ಗುಹೇಶ್ವರಾ ನಿಮ್ಮ ಶರಣಂಗೆ! ಆತ ಮಹಾಮಹಿಮ ನೋಡಯ್ಯಾ.