ಮಾಡಿ ಮಾಟವ ಮರೆದು,
ಕೂಡಿ ಕೂಟವ ಮರೆದು,
ಬಯಲ ಸಮರಸದೊಳಗೆ
ಬಯಲ ಬಯಲಾಗಿಪ್ಪವರಾರು
ಹೇಳಾ ಬಸವಣ್ಣನಲ್ಲದೆ?
ತನ್ನ [ಅ]ಭಿನ್ನವ ಮಾಡಿ ಅನ್ಯವೇನೂ ಇಲ್ಲದೆ
ತನ್ನ ತಾ ಮರೆದಿಪ್ಪವರಾರು ಹೇಳಾ ಬಸವಣ್ಣನಲ್ಲದೆ?
ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ
ನಮೋ ನಮೋ ಎಂಬೆನು.
Transliteration Māḍi māṭava maredu,
kūḍi kūṭava maredu,
bayala samarasadoḷage
bayala bayalāgippavarāru
hēḷā basavaṇṇanallade?
Tanna [a]bhinnava māḍi an'yavēnū illade
tanna tā maredippavarāru hēḷā basavaṇṇanallade?
Guhēśvarā nim'ma śaraṇa saṅgabasavaṇṇana nilaviṅge
namō namō embenu.
Hindi Translation किया गया काम भूले,मिली भेंट भूले ,
शून्य समरस में शून्य शून्य हुआ किसने कहा
बसवण्णा के अलावा ?
अपने को भिन्नकर अन्य बिना कोई
अपने आप को भूले हुए किसने कहा
बसवण्णा के अलावा ?
गुहेश्वरा तुम्हारे शरण संगनबसवण्णा की स्थिति को
नमो नमो कहूँगा।
Translated by: Eswara Sharma M and Govindarao B N