Index   ವಚನ - 112    Search  
 
ಜಗದ ಪ್ರಾಣಿಗಳಂತೆ ಉಲಿವವರಿಗೆ, ಜಗದೀಶನ ಮಂತ್ರವೆಂತು ನೆಲಗೊಂಬುದಯ್ಯ? "ಯಥಾ ಮನಸ್ತಥಾವಚನಂ" ಎಂದುದಾಗಿ. ಹೇಗೆ ಮನ ಹಾಗೆ ವಚನ ತಪ್ಪದು. ಅದು ಕಾರಣ, ಮನದಲ್ಲಿ ನಿಮ್ಮ ನೆನಹು ನೆಲೆಗೊಂಡವಂಗೆ, ನುಡಿಯೊಡನೆ ಮಂತ್ರ ನೆಲೆಸಿಪ್ಪುದು ಸತ್ಯ. ನೀನೆ ಬಲ್ಲೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.