ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ,
ಲಿಂಗನಿಷ್ಠಾಪರನಾಗಿ ಲಿಂಗಾರ್ಚನೆಯ ಮಾಡಿ,
ಸಕಲಪದಾರ್ಥವ ಲಿಂಗಕ್ಕೆ ಕೊಟ್ಟು, ಲಿಂಗಪ್ರಸಾದವ ಕೊಂಡು,
ಲಿಂಗಸುಖ ಸಂಪನ್ನರಾದ ಲಿಂಗಭೋಗೋಪಭೋಗಿಗಳಲ್ಲಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಸದಾ ಸನ್ನಿಹಿತನು.
Art
Manuscript
Music
Courtesy:
Transliteration
Śrī vibhūtiya, rudrākṣiya dharisi,
liṅganiṣṭhāparanāgi liṅgārcaneya māḍi,
sakalapadārthava liṅgakke koṭṭu, liṅgaprasādava koṇḍu,
liṅgasukha sampannarāda liṅgabhōgōpabhōgigaḷalli
nijaguru svatantrasid'dhaliṅgēśvaranu sadā sannihitanu.