•  
  •  
  •  
  •  
Index   ವಚನ - 1446    Search  
 
ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ ಅರಿವಿಂಗೆ ಅರಿವಾಗಿಪ್ಪ ಭೇದವು ಎನಗೆ ಕಾಣಬಂದಿತ್ತು ನೋಡಾ. ನಿನ್ನ ಒಳಗಾನೊರೆದು ನೋಡಿದಡೆ, ಒರೆದೊರೆಯಿಲ್ಲದ ಚಿನ್ನದ ಪರಿಮಳ ಎನ್ನ ಮನವನಾವರಿಸಿ ಪರಮಸುಖದ ಪರಿಣಾಮವನು ಒಳಕೊಂಡಿತ್ತು ನೋಡಾ. ಈ ಕುರುಹಿನ ಮೊಳೆಯ ಬರಿಯ ಬಯಲಲ್ಲಿ ನಿಲಿಸಿ ನಿಲವ ನೋಡಿ ಕೂಡಾ, ನಮ್ಮ ಗುಹೇಶ್ವರನ ಶರಣ ಅಜಗಣ್ಣನೊಳಗೆ ನೀನು ನಿರಾಳಸಂಗಿಯಾಗಿ.
Transliteration Muktige mukhavāgi yuktige horagāgi ariviṅge arivāgippa bhēdavu enage kāṇabandittu nōḍā. Ninna oḷaga oredu nōḍidaḍe, oreyillada cinnada parimaḷa enna manavanāvarisi paramasukhada pariṇāmavanu oḷakoṇḍittu nōḍā. Ī kuruhina moḷeya bariya bayalalli nilisi nōḍi kūḍā, nam'ma guhēśvarana śaraṇa ajagaṇṇanoḷage nīnu nirāḷasaṅgiyāgi.
Hindi Translation मुक्ति का मुख बने,युक्ति से बाहर होकर ज्ञान का ज्ञान बने भेद मुझे दिखाई दिया था देख। तेरे अंदर कसौटी से देखे तो, कसौटी पर न तुले सोने का परिमल मेरे मन में व्याप्त कर परम सुख के परिणाम से मिला हुआ था देख । इस चिह्न की कीले को‌ सिर्फ शून्य में खड़ाकर देखने पर भी, हमारे गुहेश्वर के शरण अजगण्णा में तू निरालसंगी बने। Translated by: Eswara Sharma M and Govindarao B N