ಮುಕ್ತಿಗೆ ಮುಖವಾಗಿ ಯುಕ್ತಿಗೆ ಹೊರಗಾಗಿ
ಅರಿವಿಂಗೆ ಅರಿವಾಗಿಪ್ಪ ಭೇದ ಕಾಣಬಂದಿತ್ತು ನೋಡಾ!
ಅರಿವರಿತು ಮರಹು ನಷ್ಟವಾಗಿಪ್ಪುದು ನಿನ್ನಲ್ಲಿ ಸನ್ನಿಹಿತವಾಗಿತ್ತು.
ಗುಹೇಶ್ವರನ ಶರಣ ಅಜಗಣ್ಣನ ನಿಲವು
ಬಯಲ ಬೆರಸಿದ ಮರೀಚಿಯಂತಾಯಿತ್ತು,
ಬೆರಸಿ ನೋಡಾ ಬೇರಿಲ್ಲದ.
Transliteration Muktige mukhavāgi yuktige horagāgi
ariviṅge arivāgippa bhēda kāṇabandittu nōḍā!
Arivaritu marahu naṣṭavāgippudu ninnalli sannihitavāgittu.
Guhēśvarana śaraṇa ajagaṇṇana nilavu
bayala berasida marīciyantāyittu,
berasi nōḍā bērillada.
Hindi Translation मुक्ति के मुख बने,युक्ति से बाहर होकर
ज्ञान को ज्ञान बने भेद दिखायी दिखा आया था देख ।
ज्ञान जानकर भूल नष्ट हुआ तुझमें सन्निहित हुआ था।
गुहेश्वर का शरण अजगण्णा की स्थिति
शून्य मिलाये मृगतृष्णा जैसी हुई थी
मिलाकर देखो दूसरे केबिना।
Translated by: Eswara Sharma M and Govindarao B N