ವಚನ - 1450     
 
ಮುನ್ನ ಎಂತಾಯಿತ್ತು? ಆಗದಡೆಂತಾಯಿತ್ತು? ತನ್ನ ತಾನು ಅರಸುತ್ತಿದ್ದಿತ್ತು. ತನ್ನ ಬಚ್ಚಿಟ್ಟ ಬಯಕೆಯ ನಿಧಾನವ ಕಂಡು ತಾನೆ ಮಹವೆಂದು ತಿಳಿದು ನೋಡಾ. ಗುಹೇಶ್ವರಲಿಂಗ ತನ್ನುವ ತನ್ನಂತೆ ಮಾಡಿತ್ತು.