•  
  •  
  •  
  •  
Index   ವಚನ - 1451    Search  
 
ಮುನಿಯದಿರಿ ಮುನಿಯದಿರಿ, ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ-ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡೆದವರು ಬೇಲಿಯ ಹೊಗದೆ ಹೋಹುದೆ ಅಯ್ಯಾ? ವ್ಯಾಧನು ಸೂಸಲ ಚೆಲ್ಲಿ, ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ| ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ||” ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ| ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ|| ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
Transliteration Muniyadiri muniyadiri, nimagondu yuktiya hēḷihenu, adentendaḍe: Nīvenna vanśībhūtarāda kāraṇa-nim'ma heccu kundu ennadāgi, nim'ma asti nāsti ennadāgi, nim'ma hānivr̥d'dhi ennadāgi. Hāva haḍedavaru bēliya hogade hōhude ayyā? Vyādhanu sūsala celli, jantrava haṇṇi, aḍigallanoḍḍi hōdabaḷika sūsala kampige heggaṇa bandu biddante biddirallā māyada baleyalli! Kōpavemba aḍaganoḍḍi tāpavemba aregallanirisi husiyemba mīṭugavaṇeya jantrisi, honnu heṇṇu maṇṇemba aḍigallanoḍḍi keḍahidanallā niṣkaruṇi mukkaṇṇa vyādhanu! Adentendaḍe, śivarahasyadalli: ``Nis'saṅgatvaṁ nirābhārī nis'sīmaṁ nirupādhikaṁ| nirdēhaṁ nirmalaṁ nityaṁ satyaṁ jaṅgamalakṣaṇaṁ||” intemba śrutyarthava kēḷade, jaṅgamavāgi suḷiva maruḷugaḷirā kēḷire, idakke matteyū śruti: ``Sukhaṁ ca bindumātrēṇa duḥkhaṁ parvata ēva ca| hariṇīpādamātrēṇa bandhanaṁ tu jagatrayaṁ|| intemba śrutigoḷagāgade honnu heṇṇu maṇṇināseyaṁ biṭṭu kōpa tāpamaṁ biṭṭu, bhrāntu bhrameyaṁ biṭṭu jaṅgamavāgabēku kāṇire maruḷugaḷirā. Intī ṣaḍulōbhada ruci hiṅgi jaṅgamavādallade bhava hiṅgadu kāṇā guhēśvarā.
Hindi Translation गुस्सा मत हो, गुस्सा मत हो तुम्हें एक युक्तिकहूँगा वह कैसे कहेंतो:- तुम मेरे वशीभूत हुए कारण - तुम्हारी अधिक कमी भी मेरी बनि है तुम्हारी अस्ति, नास्ति मेरी बनी, तुम्हारीहानि वृद्धि मेरी बनी, सॉंप जनमे बाड घुसेंग घुस जायेंगे अय्या? व्याध मिठायीबिखेरे यंत्र फैलाकर आधारशिला रख जाने के बाद मिठाई की खुशबू को घूस आकर गिरे जैसे माया के जाल में गिरे। क्रोध जैसा गोश्तरख, ताप जैसा पत्थर रखकर, झूठ जैसे गुलेल यंत्र रखकर सोना, स्त्री, मिट्टी जैसे आधार शिला रखे गिरा दिया न निर्दयी त्रिनेत्रव्याध ने ! वह कैसे कहें तो शिवरहस्य में - ‘निस्संगत्व निराभारी निस्संगी निरुपाधिकं । निर्देहं निर्मल नित्यं सत्यं जंगम लक्षणं’ ॥ ऐसे श्रुत्यर्थ को बिना सुने, जंगम बने घूमते पागल सुनिये, इसकी और एक‍ शृति है: ‘सुखं च बिंदुमात्रेण दु:ख पर्वत एव च । हरिणी पाद मात्रेण बंधन तु जगत्रयं’, ऐसीशृति से मिले सोना, स्री, मिट्टी की आशा छोडे क्रोध ताप छोडकर, भ्रांत भ्रम छोडकर, जंगम बनना चाहिए देखिए अरे पागल। ऐसे षड्लोभ की रुचि नाश होकर जंगम बने बिना भवनाश नहीं होता देख गुहेश्वरा। Translated by: Eswara Sharma M and Govindarao B N