Index   ವಚನ - 224    Search  
 
ಕರ್ಣಂಗಳು ಕೇಳಿದ ಶಬ್ದದಿಂದಾದ ಸುಖವನು, ನೇತ್ರಂಗಳು ನೋಡಿದ ರೂಪಿನಿಂದಾದ ಸುಖವನು, ರಸನೆ ಸವಿದ ರಸದಿಂದಾದ ಸುಖವನು, ವಾಸಿಸುವ ಘ್ರಾಣದಿಂದರಿವ ಗಂಧಸುಖವನು, ಮುಟ್ಟುವ ತ್ವಕ್ಕಿನಿಂದಾದ ಸ್ಪರ್ಶಸುಖವನು, ಅರ್ಪಿತವ ಮಾಡಿ ಅನುಭವಿಸುವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯು.