Index   ವಚನ - 229    Search  
 
ಶಿವನ ಶಿವಪ್ರಸಾದಿಯ ಉಭಯಸಂಬಂಧ ಸಹಭೋಗವೆಂತೆಂದೊಡೆ: ಶಿವ ತನ್ನ ನೇತ್ರಂಗಳನು ಪ್ರಸಾದಿಯ ನೇತ್ರದಲ್ಲಿ ಕೂಡಿ ರೂಪವನರಿವನು. ಶಿವ ತನ್ನ ಶ್ರೋತ್ರಂಗಳನು ಪ್ರಸಾದಿಯ ಶ್ರೋತ್ರದಲ್ಲಿ ಕೂಡಿ ಶಬ್ದವನರಿವನು. ಶಿವ ತನ್ನ ಘ್ರಾಣವನು ಪ್ರಸಾದಿಯ ಘ್ರಾಣದಲ್ಲಿ ಕೂಡಿ ಗಂಧವನರಿವನು. ಶಿವ ತನ್ನ ಜಿಹ್ವೆಯನು ಪ್ರಸಾದಿಯ ಜಿಹ್ವೆಯಲ್ಲಿ ಕೂಡಿ ರಸವನರಿವನು. ಶಿವ ತನ್ನ ಅಂಗವನು ಪ್ರಸಾದಿಯ ಅಂಗದಲ್ಲಿ ಕೂಡಿ ಸ್ಪರ್ಶವನರಿವನು. ಶಿವ ತಾನು ಬೇರೆ ಭೋಗಿಸಲೊಲ್ಲದೆ, ಪ್ರಸಾದಿಯ ಹೊಕ್ಕು ಭೋಗಿಸುವನಾಗಿ,ಸೋಹಂ ಎನ್ನದೆ ದ್ವೈತಾದ್ವೈತವ ಮೀರಿದ ಪ್ರಸಾದಿ ಸಂಗನಬಸವಣ್ಣನ ಸುಖಾತಿಶಯವನೇನೆಂದುಪಮಿಸುವೆನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.