Index   ವಚನ - 357    Search  
 
ಜಗಭರಿತ ಶಿವನೆಂದು ನೆಗಳಿ ಹೊಗಳುತಿವೆ ವೇದಂಗಳೆಲ್ಲ. `ಏಕಮೇವಾದ್ವಿತೀಯ' ಎಂದು ಹೊಗಳುತಿವೆ ವೇದಂಗಳೆಲ್ಲ. `ವಿಶ್ವತಃ ಪಾದ ಪಾಣಿ, ವಿಶ್ವತೋಮುಖ ವಿಶ್ವತಃ ಶ್ರೋತ್ರ' ಎಂದು ಹೊಗಳುತಿವೆ ವೇದಂಗಳೆಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ. ಶರಣಭರಿತ ಲಿಂಗ ಲಿಂಗಭರಿತ ಶರಣನೆಂದು, ಹೊಗಳಲರಿಯದೆ ನಿಂದುವು ವೇದಂಗಳೆಲ್ಲ.