Index   ವಚನ - 388    Search  
 
ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲಿಂಗದಲ್ಲಿ ಧ್ಯಾನನಿಷ್ಠನಾದ ಯೋಗಿ ಎಲ್ಲಾ ಕಡೆಯಲ್ಲಿ ಪರಿಪೂರ್ಣ ಜ್ಞಾನದೃಷ್ಟಿಯಿಂದ ನೋಡಲು ಪಶ್ಚಿಮಮುಖವಾದ ಪರತತ್ವವೆಂಬ ನಿರ್ಮಲ ದರ್ಪಣದೊಳಗೆ ತನ್ನ ಕಂಡು, ಕಂಡೆನೆಂಬ ಚಿದಹಂಭಾವವಳಿದು ನಿಂದ ನಿಲವೇ ನಿಜ ನಿರ್ವಾಣವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.