Index   ವಚನ - 390    Search  
 
ನಿತ್ಯಾನಂದ ಸಂವಿದಾಕಾರ ಜ್ಯೋತಿರ್ಲಿಂಗ ಮೂರ್ತಿಯಾದ ಶಿವನು ಜಲ ಗಂಧ ಅಕ್ಷತೆ ಪತ್ರೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಂಗಳಿಂದ ಪೂಜೆ ಮಾಡುವ ಪೂಜಕರ ಭಾವಕ್ಕೆ ಸಿಲುಕವನಲ್ಲ ನೋಡಾ. ಮತ್ತೆಂತೆಂದಡೆ: ಭಾವವ ಬಲಿದು ನೆನಹ ನೇತಿಗೊಳಿಸಿ, ಜ್ಞಾನಪೂಜೆಯ ಮಾಡುವ ಮಹಂತರಿಗೆ ಸಿಲ್ಕುವ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.