Index   ವಚನ - 391    Search  
 
ಸ್ಥಾವರ ಜಂಗಮಾತ್ಮಕವಾದ ಸಮಸ್ತ ಲೋಕವನು ಸುಜ್ಞಾನವಿಚಾರವಿಡಿದು ಗ್ರಹಿಸಿ, ತಾನು ಗ್ರಹಿಸಿದ ಲೋಕವು, ಸೂತ್ರದಲ್ಲಿಯೆ ಮಣಿಗಣದಂತೆ ಶಿವನಾಧಾರವಾಗಿಹೆನೆಂದರಿದು, ಅಂಥಾ ಲೋಕಾಧಾರವಾದ ಶಿವನ ನಿರ್ಮಲ ಸಾತ್ವಿಕಗುಣಿಗಳಾದ ಶಿವಜ್ಞಾನಿಗಳು ಕಂಡು ಸಮಾಧಿನಿಷ್ಠರಾಗಿಹರು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು.