Index   ವಚನ - 40    Search  
 
ಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಗಳೆಂಬಿವಕ್ಕೆ ವಿವರಂ- ಗಂಧರೂಪರುಚಿ ತೃಪ್ತಿ. ರಸರೂಪರುಚಿ ತೃಪ್ತಿ. ರೂಪರೂಪರುಚಿ ತೃಪ್ತಿ. ಸ್ಪರ್ಶರೂಪರುಚಿ ತೃಪ್ತಿ. ಶಬ್ದರೂಪರುಚಿ ತೃಪ್ತಿ. ತೃಪ್ತಿರೂಪರುಚಿ ತೃಪ್ತಿ. ಇಂತೀಯಷ್ಟಾದಶ ಸಕೀಲಂಗಳೆಯೊಂದೊಂದು ಲಿಂಗದೊಳಾರಾರುಲಿಂಗಗಳ್ಮೀಸಲೊಂದೊಂದರೊಳು ಪದಿನೆಂಟು ಕೂಡಿ ನೂರೆಂಟು ತೆರದರ್ಪಣಮಾಗಲದೆಲ್ಲಂ ನಿಜ ವಿಲಾಸವಯ್ಯಾ, ಪರಮ ಶಿವಲಿಂಗ ಪ್ರಪಂಚ ಸಾರ ನಿಸ್ಸಂಗ.