ಬಳಿಕ್ಕಮೆಲರುಗೊಂಟುಗಳ ನಡುವಣ ಮಂಡಲಾಶ್ರಯದ,
ತನ್ನಾರು ತನು ಪಸಿರ್ವಣ್ಣದ,[ಕ]ಕಾ[ರಾ]ದಿ ಠಾಂತಾನ್ವಿತದ
ಪನ್ನೆರಡೆಸಳ ತಾವರೆಯ ಕರ್ನಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದರೆವೆರೆಯಾದ,
ವಕಾರವೆ ಜಂಗಮಲಿಂಗಮದು,
ನಿನ್ನ ತತ್ಪುರುಷ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪ್ರಥಿತ ಪ್ರಸಂಗ.
Art
Manuscript
Music
Courtesy:
Transliteration
Baḷikkamelarugoṇṭugaḷa naḍuvaṇa maṇḍalāśrayada,
tannāru tanu pasirvaṇṇada,[ka]kā[rā]di ṭhāntānvitada
panneraḍesaḷa tāvareya karnikeya,
sūkṣmarandhragata praṇavadarevereyāda,
vakārave jaṅgamaliṅgamadu,
ninna tatpuruṣa svarūpamādudayyā,
parama śivaliṅga prathita prasaṅga.
ಸ್ಥಲ -
ಇತ್ಯಂಗಲಿಂಗ ಸ್ಥಲಮುಕ್ತಂ