ಮತ್ತೆಯುಮೀ ಮಹಾಲಿಂಗದೂರ್ಧ್ವಪಟ್ಟಿಕಾಸಂಜ್ಞೆಯನುಳ್ಳಾಧಾರಚಕ್ರದ
ರುದ್ರಸ್ವರೂಪಮೆಂತೆನೆ-
ವ ಬಕಂ, ಶ ಶ್ವೇತಂ, ಷ ಭೃಗ್ವೀಶಂ,
ಸ ಲಕುಲಿ, ಳ ಶಿವಂ, ಕ್ಷ ಸಂವರ್ತಕಂ.
ಈ ಷಡ್ವಿಧರುದ್ರರೊಳಗೆ ಮೊದಲ ನಾಲ್ವರೆ
ಆಧಾರಚಕ್ರದ ಚತುಃಕೋಷ್ಠದಳನ್ಯಸ್ತ ರುದ್ರರು.
ಉಳಿದಿರ್ವರೆ ಪೂರ್ವೋಕ್ತ ಮಹಾಲಿಂಗದಾಜ್ಯಪ್ರಧಾರಿಕಾ
ದ್ವಿಕೋಷ್ಠದಳನ್ಯಸ್ತ ದ್ವಿರುದ್ರರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ.
Art
Manuscript
Music
Courtesy:
Transliteration
Matteyumī mahāliṅgadūrdhvapaṭṭikāsan̄jñeyanuḷḷādhāracakrada
rudrasvarūpamentene-
va bakaṁ, śa śvētaṁ, ṣa bhr̥gvīśaṁ,
sa lakuli, ḷa śivaṁ, kṣa sanvartakaṁ.
Ī ṣaḍvidharudraroḷage modala nālvare
ādhāracakrada catuḥkōṣṭhadaḷan'yasta rudraru.
Uḷidirvare pūrvōkta mahāliṅgadājyapradhārikā
dvikōṣṭhadaḷan'yasta dvirudrarendu niravisideyayyā,
paraśivaliṅgayya.
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ