Index   ವಚನ - 195    Search  
 
ಮರಲ್ದು, ಷಡಕ್ಷರನ್ಯಾಸಮಂ ಪೇಳ್ವೆನೆಂತನೆ ಓಂಕಾರಮಂ ಲಿಂಗದಲ್ಲಿಡುವುದು. ನಕಾರಮಂ ಶಕ್ತಿಪೀಠದೂರ್ಧ್ವಪಟ್ಟಿಕೆಯಲ್ಲಿರಿಸೂದು. ಮಕಾರಮನೂರ್ಧ್ವಕಂಜದಲ್ಲಿ ಮಡಗುವದು. ಶಿ ಕಾರಮಂ ವೃತ್ತದಲ್ಲಿ ಸಂಬಂಧಿಪುದು. ವಕಾರಮಂ ಅಧಃಕಂಜದಲ್ಲಿ ನ್ಯಾಸೀಕರಿಸುವುದು. ಯ ಕಾರಮನಧಃಪಟ್ಟಿಕೆಯಲ್ಲಿ ನೆಲೆಗೊಳಿಪುದೆಂದೀ ಷಡಕ್ಷರನ್ಯಾಸಮಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.