Index   ವಚನ - 198    Search  
 
ಮತ್ತಂ, ಷಡಧ್ವನ್ಯಾಸಮೆಂತೆನೆ- ಪೃಥ್ವೀಸ್ಥಾನಮಪ್ಪಧಃಪಟ್ಟಿಕಾ ಸಂಜ್ಞಿಕವಾದಾಧಾರಸ್ಥಾನದಲ್ಲಿ ಭುವನಾಧ್ವಮನುದಕಸ್ಥಾನವಪ್ಪಧಃಕಂಜಸಂಜ್ಞಿಕ ಸ್ವಾಧಿಷ್ಠಾನದಲ್ಲಿ, ಪದಾಧ್ವಮನಗ್ನಿಸ್ಥಾನವಪ್ಪ ಕಂಠಸಂಜ್ಞಿಕ ಸ್ವಾಧಿಷ್ಠಾನದಲ್ಲಿ ಪದಾಧ್ವಮನಗ್ನಿಸ್ಥಾನವಪ್ಪ ಕಂಠಸಂಜ್ಞಿಕ ವೃತ್ತವೆನಿಪ ಮಣಿಪೂರಕದಲ್ಲಿ, ವರ್ಣಾಧ್ವಮನೂರ್ಧ್ವಾಬ್ಜ ಸಂಜ್ಞಿಕವಪ್ಪನಾಹತದಲ್ಲಿ, ಕಲಾಧ್ವಮನೂರ್ಧ್ವ ಪಟ್ಟಿಕಾಸಂಜ್ಞಿಕವಪ್ಪ ವಿಶುದ್ಧಿಯಲ್ಲಿ ತತ್ವಾಧ್ವಮನಾಜ್ಯಪ್ರಧಾರಿಕಾಸಂಜ್ಞಿಕವಪ್ಪಾಜ್ಞೇಯದಲ್ಲಿ, ಮಂತ್ರಾಧ್ವಮಂ ನ್ಯಾಸಂಗೆಯ್ವುದಿಂತು ಸಪ್ತಕೋಟಿ ಮಹಾಮಂತ್ರಾತ್ಮವಾದೀ ಮಹಾಲಿಂಗಮಂ ಪೊರಗೊಳಗೊಂದೆಯೆಂದೇಕಭಾವದಲ್ಲಿಯರ್ಚಿಪುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.