Index   ವಚನ - 206    Search  
 
ಮತ್ತಂ, ಆ ಶಾಂಭವಚಕ್ರಮೆ ಪೀಠ ಕಟ್ಯಾತ್ಮಕ ಸೂರ್ಯಮಂಡಲ, ವರ್ತುಳ ಗೋಮುಖಾತ್ಮಕ ಚಂದ್ರಮಂಡಲ, ನಾಳಗೋಳಕಾತ್ಮಕ ಪಾವಕಮಂಡಲಂಗಳೆಂದು ತ್ರಿಸ್ಥಾನಂಗಳ್. ಅವರಲ್ಲಿ ಪೂರ್ವೋಕ್ತ ಸಂಬಂಧಿತ ಸಕೀಲ ನಿಕರ ಸಮನ್ವಿತ ಷಟ್ಸ್ಥಲಾತ್ಮಕವಾದ ಸೋಹಮೆಂಬಾತ್ಮಪ್ರಸಾದ. ಮನುವಿನ ವ್ಯಂಜನ ಸ್ ಹ್ ಎಂಬಕ್ಷರದ್ವಯಮಂ ಕುಂಭಕದೊಳ್ ಲೋಪಿಸಲುಳಿಜಾಮೆಂಬೇಕಾಕ್ಷರಮಯವಾದ ಮಹಾಲಿಂಗವೆನಿಸಿತ್ತಾ ಮಹಾಲಿಂಗವೆ ಮಹಾಚಕ್ರವೆನಿಸಿತ್ತಾ ಮಹಾಚಕ್ರವೆ ಸಹಸ್ರಕಮಲವೆನಿಸಿತ್ತೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.