ಎನ್ನ ಅಷ್ಟಾಕ್ಷರ ಸ್ವರೂಪವನೊಳಕೊಂಡು ಎನ್ನ ತನುವಿನಲ್ಲಿ
ಸಂಗವಾದನಯ್ಯ ಬಸವಣ್ಣ.
ಎನ್ನ ಷಡಾಕ್ಷರ ಸ್ವರೂಪವನೊಳಕೊಂಡು ಎನ್ನ ನಯನದಲ್ಲಿ
ಸಂಗವಾದನಯ್ಯ ಚೆನ್ನಬಸವಣ್ಣ.
ಎನ್ನ ಪಂಚಾಕ್ಷರ ಸ್ವರೂಪವನೊಳಕೊಂಡು ಎನ್ನ ಪ್ರಾಣದಲ್ಲಿ
ಸಂಗವಾದನಯ್ಯ ಪ್ರಭುದೇವರು.
ಇಂತೀ ತನು ಮನ ಪ್ರಾಣವೆ ಸಚ್ಚಿದಾನಂದ ಬ್ರಹ್ಮವು.
ಆ ಸಚ್ಚಿದಾನಂದ ಬ್ರಹ್ಮವೆ ಎನ್ನ ಭಾವ ಮನ ಕರಣಂಗಳೊಳಗೆ
ತಳತಳನೆ ಹೊಳಹುತ್ತಿಪ್ಪ ಭೇದವನು
ಸಿದ್ಧೇಶ್ವರನೆನಗೆ ಅರುಹಿದ ಕಾರಣ
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ
ಸಮುದ್ರದೊಳಗೆ ಮುಳುಗಿದ ವಾರಿಕಲ್ಲಿನಂತಾದೆನಯ್ಯ
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
Art
Manuscript
Music
Courtesy:
Transliteration
Enna aṣṭākṣarasvarūpavanoḷakoṇḍu enna tanuvinalli
saṅgavādanayya basavaṇṇa.
Enna ṣaḍākṣarasvarūpavanoḷakoṇḍu enna nayanadalli
saṅgavādanayya cennabasavaṇṇa.
Enna pan̄cākṣara svarūpavanoḷakoṇḍu enna prāṇadalli
saṅgavādanayya prabhudēvaru.
Intī tanu mana prāṇave saccidānanda brahmavu.
Ā saccidānanda brahmave enna bhāva mana karaṇaṅgaḷoḷage
taḷataḷane hoḷahuttippa bhēdavanu
sid'dhēśvaranenage aruhida kāraṇa
paran̄jyōti mahāliṅgaguru sid'dhaliṅga prabhuvinalli
samudradoḷage muḷugida vārikallinantādenayya
bōḷabasavēśvara nim'ma dharma nim'ma dharma.