Index   ವಚನ - 17    Search  
 
ದೇವ ಕಂಬಳಕ್ಕೆ ಹೋಗಿ ಕನಕದ ಕೊಡನ ಕಂಡಂತೆ ಮರ್ತ್ಯಲೋಕಕ್ಕೆ ಬಂದು ಮಾನವಜನ್ಮವ ಕಂಡೆ. ಆ ಮಾನವ ಜನ್ಮಕ್ಕೆ ಘೃಣಾಕ್ಷರ ನ್ಯಾಯದಂತೆ ಲಿಂಗ ಬಂದುದ ಕಂಡೆ. ಎನಗಿದು ಚೋದ್ಯವಯ್ಯ ಎನಗಿದು ವಿಪರೀತವಯ್ಯ ಇದಕ್ಕೆ ನುಡಿದಂತೆ ನಡೆಸು ನಡೆದಂತೆ ನುಡಿಸು. ನುಡಿ ನಡೆಗೆ ಭಿನ್ನವಾದರೆ ನಿಮ್ಮ ಶರಣರೊಪ್ಪರು. ನಿಮ್ಮ ಶರಣರೊಪ್ಪದಲ್ಲಿಯೆ ನೀನೊಪ್ಪೆ. ನೀನೊಪ್ಪದಲ್ಲಿಯೆ ಬಂದಿತೆನಗೆ ಭವದ ಹೆಮ್ಮಾರಿ. ಅದಕ್ಕೆ ನಾನಂಜುವೆನಯ್ಯ ನಾನಳಕುವೆನಯ್ಯ. ನುಡಿ- ನಡೆ ಎರಡಾಗದಂತೆ ನಡೆಸಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.