ತಾನೆಂಬ ತೋರಿಕೆ ತನಗಿಲ್ಲವಾಗಿ,
ತನ್ನಿಂ ತೋರುವ ವಿಶ್ವಪ್ರಪಂಚವೇನೊ ಇಲ್ಲದ ನಿರ್ವಾಚ್ಯವಾಗಿರ್ದ
ಪರಬ್ರಹ್ಮವು, ತನ್ನ ಲೀಲೆಯಿಂ
ತಾನೆಯಖಂಡಗೋಳಕಾಕಾರಮಪ್ಪ ಸ್ವಯಂಭುಲಿಂಗವಾಯಿತ್ತು.
ಆ ಲಿಂಗದಿಂದಾಯಿತ್ತು ಸಕಲ ನಿಃಕಲ ಶಿವಶಕ್ತ್ಯಾತ್ಮಕವಪ್ಪ ಸದಾಶಿವ.
ಆ ಸದಾಶಿವನ ಪಂಚಮುಖದಿಂದಾದವು ಪಂಚಭೌತಿಕ.
ಆ ಪಂಚಭೌತಿಕದಿಂದಾದವು ಪಂಚವಿಶಂತಿತತ್ವಂಗಳು.
ಅದೆಂತೆಂದಡೆ:
ಅನಿರ್ವಾಚ್ಯಪದಂ ವಸ್ತುಸ್ವಲೀಲಾನಂದ ಕಾರಣಂ |
ಸ್ವಯಮೇವ ಸ್ವಯಂಭೂತ್ವಾಸ್ಸ್ವಯಮೇವದ್ವಿಧಾ ಭವೇತ್ ||
ಶಿವಂ ಬ್ರಹ್ಮೇತಿಪ್ರಾಹುಃ ಶಕ್ತಿಸ್ಚೈವಾಂಗಮುಚ್ಯತೇ |
ಶಿವಶಕ್ತಿ ಸಮಾಯೋಗಂ ಜಗತ್ಸೃಷ್ಟ್ಯಾರ್ಥಕಾರಣಂ ||
ಈಶಾನಾದ್ಯೋಮಸಂಭೂತಿಸ್ತತ್ಪುರ್ಷಾದ್ವಾಯ ಸಂಭವಃ |
ಅಘೋರಾದ್ವಹ್ನಿರಿತ್ಯುಕ್ತಂ ವಾಮದೇವಾದ್ಜಲಸ್ತತಥಾ ||
ಸದ್ಯೋಕಾತಾದಿಯಂ ಪೃಥ್ವೀ ಶಿವವಕ್ತ್ರಾದ್ವಿನಿರ್ಗತಾ |
ಕರ್ಮಾಖ್ಯಪೃಥ್ವಿ ಸಂಭೂತಿರ್ವಿಷಯಾಃ ಜಲಸಂಭವಃ ||
ಅಗ್ನಿಜಾತೇಂದ್ರಿಯಂ ಜ್ಞೇಯಂ ಮರುನ್ಮಾರುತಪಂಚಕಃ |
ನಭಾತ್ಕರಣ ಸಂಜಾತಮಿತಿ ಜ್ಞಾತ್ಪಂಚವಿಂಶತಿಃ | ಎಂದುದಾಗಿ,
ಆ ಪಂಚಮಿಂಶತಿತತ್ವವೇ ದೇಹದೇಹಿಗಳೆಂಬ ನಾಮದಿಂ ಪಿಂಡವಾಯಿತ್ತು.
ಆ ಪಿಂಡಮಧ್ಯದಲ್ಲಿ ಮರದೊರದಿರವನೆಚ್ಚತ್ತಂತೆ ವಿವೇಕ ತಲೆದೋರಲು,
ಆ ವಿವೇಕದಿಂ ತಾನಾರಿದೆಲ್ಲಿಯದೆತ್ತಣ ಮರವೆಯೆಂದು ವಿಚಾರಿಸಿ,
ಅದೆಂತೆಂದಡೆ:
ಯಥಾ ಪೂರ್ವಂ ಜಾಗ್ರತೀತಃ ಪಶ್ಚಾತ್ಸುಪ್ತಿಮನುಭೂಯ |
ಪಶ್ಚಾತ್ಜಾಗರಣಮೇವಾನು ಸಂಧತ್ತೇ ತಥಾಪಿಂಡಭೂತೇ |
ಸ್ವಸ್ಮಿನೇದ ವಿಚಾರ ಜ್ಞಾನಮುತ್ಪದ್ಯತೇ ಇತಿ ||
ಕೋಹಂ ಕಥಮಯಂ ದೋಷಸ್ಸಂಸಾರಾಖ್ಯ ಉಪಾಗತಃ |
ನೇತಿ ನೇತಿ ಪರಾಮರ್ಶೋ ವಿಚಾರಯಿತಿ ಕಥತೇ ||
ಮನೋವಿಲಾಸ ಸಂಸಾರ ಇತಿ [ಏನ ] ಪ್ರಕೀರ್ತತೇ |
ಪುತ್ರದಾರಾದಿ ಸಂಸಾರಃ ಪುಂಸಾಂ ಸಂಮೂಢ ಚೇತಸಾಂ ||
ಜ್ಞಾತೇ ಸಂಸಾರ ಪಿಂಡೇಸ್ಮಿನ್ ಜಿಗುಪ್ಸಾದೋಷದರ್ಶನಾತ್ |
ವೈರಾಗ್ಯಪ್ರಾಪ್ತ ಮೋಕ್ಷಸ್ಯ ಸಂಸಾರೋ ಹೇಯವಾನ್ ಭವೇತ್ ||
ಎಂದುದಾಗಿ, ಪಿತ ಮಾತೆ ಸತಿಸುತ ಸೋದರ ಮೊದಲಾದ
ಸರ್ಮಸಂಸಾರಮಂ ನಿವೃತ್ತಿಯಂ ಮಾಡಿ,
ಗುರುಸನ್ನಿಧಿಯಲ್ಲಿ‘ಯದಿ ಅಹಂ ಕಃ’ ಎಲೆ ಶ್ರೀಗುರುವೆ ಎನೆ,
‘ತ್ವಂ ತತ್ತ್ವಮಸಿ’ ಎಂಬ ಗುರುವಚನಂ ತಿಳಿದು,
ಅದೆಂತೆಂದಡೆ:
ಕೋಹಮಿತ್ಯಬ್ರವಿದ್ಧೇಹಿ ಗುರುಂ ಪರಮಕಾರಣಂ |
ಗುರುಸ್ತತ್ವಮಸೀತ್ಯಾಹ ಸತ್ಯಾರ್ಥಂ ಕರುಣಾನಿಧಿಃ |
ತತ್ವದಂ ಲಿಂಗಮಾಖ್ಯಾತಮಂಗಂ ತ್ವಂ ಪದಮೀರಿತಂ |
ಸಂಯೋಗೋಸಿಪದಂ ಪ್ರೋಕ್ತಮನೋರಂಗಲಿಂಗಯೋಃ ||
ಎಂದುದಾಗಿ ತತ್ ಲಿಂಗ ತ್ವಂ ಅಂಗ, ಅಸಿಯೆಂದು ಸಮರಸ.
ಇಂತೀ ತ್ರಿವಿಧಮನರಿದರಿವಿನಗ್ರದ ಕೊನೆಯ ಮೊನೆಯಬೆಳಗು ತಾನೆ,
ನಮ್ಮ ಪರಮಗುರು ನಂಜುಂಡಶಿವನು.
Art
Manuscript
Music
Courtesy:
Transliteration
Tānemba tōrike tanagillavāgi,
tanniṁ tōruva viśvaprapan̄cavēno illada nirvācyavāgirda
parabrahmavu, tanna līleyiṁ
tāneyakhaṇḍagōḷakākāramappa svayambhuliṅgavāyittu.
Ā liṅgadindāyittu sakala niḥkala śivaśaktyātmakavappa sadāśiva.
Ā sadāśivana pan̄camukhadindādavu pan̄cabhautika.
Ā pan̄cabhautikadindādavu pan̄caviśantitatvaṅgaḷu.
Adentendaḍe:
Anirvācyapadaṁ vastusvalīlānanda kāraṇaṁ |
svayamēva svayambhūtvās'svayamēvadvidhā bhavēt ||
Śivaṁ brahmētiprāhuḥ śaktiscaivāṅgamucyatē |
śivaśakti samāyōgaṁ jagatsr̥ṣṭyārthakāraṇaṁ ||
īśānādyōmasambhūtistatpurṣādvāya sambhavaḥ |
aghōrādvahnirityuktaṁ vāmadēvādjalastatathā ||
sadyōkātādiyaṁ pr̥thvī śivavaktrādvinirgatā |
karmākhyapr̥thvi sambhūtirviṣayāḥ jalasambhavaḥ ||
agnijātēndriyaṁ jñēyaṁ marunmārutapan̄cakaḥ |Nabhātkaraṇa san̄jātamiti jñātpan̄cavinśatiḥ | endudāgi,
ā pan̄caminśatitatvavē dēhadēhigaḷemba nāmadiṁ piṇḍavāyittu.
Ā piṇḍamadhyadalli maradoradiravaneccattante vivēka taledōralu,
ā vivēkadiṁ tānāridelliyadettaṇa maraveyendu vicārisi,
adentendaḍe:
Yathā pūrvaṁ jāgratītaḥ paścātsuptimanubhūya |
paścātjāgaraṇamēvānu sandhattē tathāpiṇḍabhūtē |
svasminēda vicāra jñānamutpadyatē iti ||
kōhaṁ kathamayaṁ dōṣas'sansārākhya upāgataḥ |
Nēti nēti parāmarśō vicārayiti kathatē ||
manōvilāsa sansāra iti [ēna] prakīrtatē |
putradārādi sansāraḥ punsāṁ sammūḍha cētasāṁ ||
jñātē sansāra piṇḍēsmin jigupsādōṣadarśanāt |
vairāgyaprāpta mōkṣasya sansārō hēyavān bhavēt ||
endudāgi, pita māte satisuta sōdara modalāda
sarmasansāramaṁ nivr̥ttiyaṁ māḍi,
gurusannidhiyalli‘yadi ahaṁ kaḥ’ ele śrīguruve ene,
‘tvaṁ tattvamasi’ emba guruvacanaṁ tiḷidu,
adentendaḍe:Kōhamityabravid'dhēhi guruṁ paramakāraṇaṁ |
gurustatvamasītyāha satyārthaṁ karuṇānidhiḥ |
tatvadaṁ liṅgamākhyātamaṅgaṁ tvaṁ padamīritaṁ |
sanyōgōsipadaṁ prōktamanōraṅgaliṅgayōḥ ||
endudāgi tat liṅga tvaṁ aṅga, asiyendu samarasa.
Intī trividhamanaridarivinagrada koneya moneyabeḷagu tāne,
nam'ma paramaguru nan̄juṇḍaśivanu.