Index   ವಚನ - 26    Search  
 
ಮತ್ತಂ ಸಾಕ್ಷಿ: ಅಪ್ಪಯ್ಯ ಗುರುರಾಯನೆ ಕೇಳು, ಎನ್ನಯ ತಾಪತ್ರಯಮಂ. ವಿಚಿತ್ರದಿಂದ ನಿನ್ನನು ಕಾಡುವುದಲ್ಲದೆ, ಸತ್ಪಥ ಸನ್ಮಾರ್ಗದಲಿ ಸಾಧು ಸತ್ಪುರುಷರ ಸಂಗದಿಂದೊಂದು ಉದ್ಯೋಗಮಂ ನೇಮಿಸಲು, ಬಹುಲಾಭದೊಳಗಾದ ಸದ್ಗುರುವೆ ನೀನೆಂದು ಕೂಡಿಕೊಂಡು, ಶುದ್ಧ ಕರುಣಾಮೃತವು ಸಿದ್ಧಪ್ರಸಾದವವನುಭವಿಸಿ, ಇಂದ್ರಿಯ ಪಂಚಂಗದ ವ್ಯಾಪಾರ ನಾಟಿ, ಮುದ್ದಿ ಬೆಲ್ಲವಂ ತೂಗಿ ಕೊಟ್ಟು ಬುದ್ಧಿಹೀನರಿಗೆ ಗದ್ದಲವ ನಡೆಸಿ, ಗುದ್ದಾಟವನಿಕ್ಕಿ, ಕಡಿಕಲ್ಲು ಕಾಣಿ ತಕ್ಕಡಿ ಎರಡೊಂದರಲ್ಲಿ ನಿನ್ನ ಮರಿಯಾದೆಯೆಂಬುವಂಥದು ನೀನೆ ಬಲ್ಲೆಯಲ್ಲದೆ ಮತ್ತಾರೂ ಅರಿಯರು. ಉತ್ತಮರು ಸತ್ಯಶಿವಶರಣರು ನಿಮ್ಮನೆ ಹಾಡಿ ಹರಸುತಿರ್ದರಲ್ಲದೆ ತಮ್ಮತಮ್ಮೊಳಗೆ ಅಡಕವಾದ ಭಾವಾರ್ಥಂ ಸುಮ್ಮನಿರಲು ಸಂತೆಯ ವ್ಯಾಪಾರ ನಡೆಯಲು, ಅಂತರ್ಭಾವದಲ್ಲಿ ನಿಶ್ಚಿಂತನಿವಾಸಿಗಳಾದ ಉತ್ತಮಪುರುಷರು ಕೆಟ್ಟದಿನಸಿನ ಪದಾರ್ಥದೊಳಗೊಂದು ವಚನಾಭಿಪ್ರಾಯವನು ಸೇವಿಸುತಿರ್ಪರು. ಸೇವಿಸುವುದರಿಂದ ಮುಡದಾರಸಿಂಗಿ ಕಾಳಕೂಟವಿಷಯವನು ಉಳಿಸಿಪ್ಪಗಾಗಲೊಲ್ಲದೆ, ಹರಗಾಲ ಬರಗಾಲ ಹೊರಗಾಲ, ಇವು ಮೂರು ತ್ರಿವಿಧಾವಸ್ಥೆಗಳಲ್ಲಿ, ಪಾಷಾಣ ಗಟ್ಟಿಗೊಂಡು, ನಿಜಶ್ರವಣಮಾಗಿ, ಪ್ರಣಮದಿಂದ ಉದ್ಯೋಗವನು ನಡಸುತಿರ್ಪರಯ್ಯಾ. ಬದಲಾಮಿ ತೂಕದಿಂದನುಭವಿಸುವಂಥದು, ಉದ್ದಿಮೆಯೊಳಗೆಲ್ಲ ಬದಲಾಮಿ ಅಜ್ಞಾನಕ್ಕೆ ಮೊದಲು ಬದಲಿಲ್ಲವೆಂದಾತ, ನೀನಲ್ಲ [ವೆ] ಎಲೆ ಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.