ಊರವಂಕದ ಹೊರಗಿದ್ದು,
ಮನೆಯ ಬಾಗಿಲ ಕಾಣೆನೆಂದು ಅರಸುವನಂತೆ,
ಇದಿರಿನಲ್ಲಿ ತೋರುವ ಕುರುಹ ಮರದು
ಅರಿವನೊಳಕೊಂಡೆನೆಂಬುವನಂತೆ,
ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ
ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
Art
Manuscript
Music
Courtesy:
Transliteration
Ūravaṅkada horagiddu,
maneya bāgila kāṇenendu arasuvanante,
idirinalli tōruva kuruha maradu
arivanoḷakoṇḍenembuvanante,
jambuka śastrada phaḷava nuṅgi jambūdvīpavellā
praḷayavāyittu endaḍe, adu candavē jāmbēśvarā.