Index   ವಚನ - 10    Search  
 
ಇನ್ನೆಲ್ಲರ ಕೇಳುವುದಕ್ಕೆ ಕುಲ ಚಲ ಮಲ ದೇಹಿಕರು ಬಿಡರೆನ್ನ. ಎದೆಯಲ್ಲಿ ಕಟ್ಟಿದ ಎಳೆಯಾಸೆ ಬಿಡದು. ಕೊಡುವ ಕೊಂಬಲ್ಲಿ ದ್ವಿಜರ ಒಡಗೂಡುವುದು ಬಿಡದು. ಎನ್ನೊಡೆಯ ಬಸವಣ್ಣ ಹೇಳಿದ ಮಾತಿಂಗೆ ಅಡಿಯಿಡಲಮ್ಮದೆ ಕಟ್ಟಿದೆ. ಹಿಡಿದು ಅರ್ಚಿಸುವುದಕ್ಕೆ ಶಿರದ ಕಡೆಯ ಕಾಣೆ. ಮಜ್ಜನ ಮಂಡೆಗೆಂದರಿಯೆ, ಪಾದಕ್ಕೆಂದರಿಯೆ. ಕುಸುಮವನಿಕ್ಕುವುದಕ್ಕೆ ಸಸಿಯಾದೆ ಮಕುಟದಲ್ಲಿ. ಪಾದಕ್ಕೆ ಮದನ ಪಿತನ ಅಕ್ಷಿಯಾದೆ ಉಂಗುಷ್ಠದಲ್ಲಿ. ಊಟಕ್ಕೆ ಬಾಯ ಕಾಣೆ, ಕೂಟಕ್ಕೆ ಅವಯವಂಗಳಿಲ್ಲ. ಮಾತಿಗೆ ಆತ್ಮನ ಕಾಣೆ. ಇದೇತರ ಮುರಿ? ಪಾಷಾಣದಂತಿದೆ! ಇದರಾಟವೆನಗೆ ಕಾಟವಾಗಿದೆ! ಅಲೇಖನಾದ ಶೂನ್ಯ ಕಲ್ಲಾದ ಭೇದವ ಮೆಲ್ಲಗೆ ಎನಗೆ ಹೇಳು.