Index   ವಚನ - 13    Search  
 
ಊರ ಹೊರಗೊಂದು ಗಿಡುಮರ. ಅದರೊಳಗೆ ಅಡಗಿಪ್ಪರು ಐವರು ಕಳ್ಳರು: ಒಬ್ಬ ನರಿ ಬಲೆಯವ, ಒಬ್ಬ ಹುಲಿ ಬಲೆಯವ, ಒಬ್ಬ ಉಡುಬೇಂಟೆಕಾರ, ಒಬ್ಬ ಬಳ್ಳುವಿನ ಕಾಲುಕಣ್ಣಿಯ ಪುಳಿಂದ, ಒಬ್ಬ ನಾಲ್ವರ ಬೇಂಟೆಯ ನೋಡುವ ಉಡಿಗಳ್ಳ. ಬೇಟೆ ಬೆಂಬಳಿಯಾದುದಿಲ್ಲ, ಬೇಟೆಗೆ ಹೋದವರೆಲ್ಲರೂ ಕಾಟಕ್ಕೆ ಒಳಗಾದರು. ಇದರಾಟವ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನ ನೆಲೆಮನೆಯ ಹೊಕ್ಕೆಯಲ್ಲ.