Index   ವಚನ - 14    Search  
 
ಊರಳಗಣ ಅರಳೆಯ ಮರದಲ್ಲಿ , ಮೂರುವರ್ಣದ ಗಿಣಿ ಮರಿಯನಿಕ್ಕಿತ್ತು. ರಟ್ಟೆ ಬಲಿದು ಹಾರಲಾರದು, ಕೊಕ್ಕು ಬಲಿದು ಕೆಂಪಾಗದು. ಬಾಯಿ ಬಲಿದು ಹಣ್ಣ ಮೆಲಲಾರದು, ಅದ ಓದಿಸುವರಿಗೆ ಅಸಾಧ್ಯ. ಅಲೇಖನಾದ ಶೂನ್ಯ ಇದರ ಹೊಲಬ ಕೇಳಿಹರೆಂದು ಕಲ್ಲಿನೊಳಗಾದ.