ಧ್ಯಾನವ ಮಾಡಿ ಕಾಬಲ್ಲಿ ಚಿತ್ತ ಪ್ರಕೃತಿಯ ಗೊತ್ತು.
ಕುರುಹುವಿಡಿದು ಕಂಡೆಹೆನೆಂದಡೆ,
ಅದು ಶಿಲೆ, ಉಳಿಯ ಹಂಗು,
ಕೊಟ್ಟವನ ಹಿಡಿದಿಹೆನೆಂದಡೆ, ಗುತ್ತಗೆಯ ಕೇಣಿಕಾರ,
ಮಾಡಿ ನೀಡಿ ಕಂಡೆಹೆನೆಂದಡೆ,
ಎನ್ನ ಮನೆಗೆ ಬಂದವರೆಲ್ಲರು,
ಉಂಡು ಉಟ್ಟು ಎನ್ನ ಹಂಗಿಗರು.
ಆಗರಗಳ್ಳನ ಹಾದರಿಗ ಕಂಡಂತೆ,
ಇನ್ನಾರಿಗೆ ಹೇಳುವರು ಆ ಘನವ?
ಅದು ಎನಗಾಯಿತ್ತು, ಅಲೇಖನಾದ
ಶೂನ್ಯ ಕಲ್ಲಿನ ಮರೆಯಾದವನೆ.