Index   ವಚನ - 31    Search  
 
ನನ್ನ ನಾನರಿವಡೆ, ಮೂರು ಹುಲಿಯ ಮಧ್ಯದಲ್ಲಿ ಸಿಲ್ಕಿದ ಶೃಂಗಿಯಂತೆ, ಮೊತ್ತದ ಸಕಲೇಂದ್ರಿಯದ ಹುತ್ತದ ಸರ್ಪನಿದ್ದ ಠಾವಿಂಗೆ ತಪ್ಪಿಹೋದ ಮೂಷಕನಂತೆ, ಎತ್ತಲೆಂದರಿಯೆ ಅರ್ತಿಯಿಂದ ಕಟ್ಟಿದೆ ಇಷ್ಟವ. ವಸ್ತುವಿನ ಹುಟ್ಟ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ.