Index   ವಚನ - 38    Search  
 
ಪುಡಿಯ ದ್ರವಹೀನವಾಗಿ ಕೂಡಿ ಕುಂಭವನೊದಗಿಸುವವನಂತೆ, ಅರಿವುಹೀನವಾಗಿ ಕುರುಹ ಎಡೆಬಿಡುವಿಲ್ಲದೆ ತೊಳೆವವನಂತೆ, ಆಸೆ ಮುಂಚು, ಅರಿವು ಹಿಂಚಾಗಿ ಜಗದೀಶನ ಪೂಜೆ ಏತರದೆಂದೆ? ಇದರ ಖ್ಯಾತವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯವನೆ.