Index   ವಚನ - 41    Search  
 
ಪೃಥ್ವಿ ನಿನ್ನ ಮುಖದಲ್ಲಿ, ಅಪ್ಪು ನಿನ್ನ ಮುಖದಲ್ಲಿ, ತೇಜ ನಿನ್ನ ಮುಖದಲ್ಲಿ, ವಾಯು ನಿನ್ನ ಮುಖದಲ್ಲಿ, ಆಕಾಶ ನಿನ್ನ ಮುಖದಲ್ಲಿ, ಪಂಚಭೂತಿಕನಾದೆ, ಸರ್ವಲೋಕ ಕುಕ್ಷಿ ಕರಂಡನಾದೆ, ನಾ ನಿನಗೆ ಹೊರಗೆ. ಅರಿವುಮಯ ನೀನಾಗಿ, ಕಲ್ಲಿನ ಮರೆ ಬೇಡ. ಮನದ ಶಿಲೆಯಲ್ಲಿ ಕುರುಹುಗೊಳ್ಳು. ಅಲೇಖನಾದ ಶೂನ್ಯ ಅವತಾರ ಶೂನ್ಯ ಎನಗೊಂದು ಹೇಳಾ.