ಬಾಹ್ಯ ರಚನೆಯಿಂದಾದ ಭಕ್ತಿ ವಿರಕ್ತಿ ಸತ್ಪಥ ಮಾರ್ಗದಿರವು,
ಮಾತಿನಲ್ಲಿಯೊ, ಚೈತನ್ಯಾತ್ಮಕ ಭಾವ ಮುಟ್ಟಿದಲ್ಲಿಯೊ?
ಉಭಯವನರಿದಲ್ಲಿ ಕಾಬವನ ಇರವು,
ಮಠದ ದೀಪ ವಾಯುವಿನ ಸಂಗದ ಕೂಟ.
ಪಾಷಾಣದಲೊದಗಿದ ಜ್ಯೋತಿಯ ಬೆಳಗು,
ವಾಯುವ ನೀತಿಗೊದಗುವುದೆ?
ಕಪಟದ ನಿಃಕಪಟದ ದೀಪದ್ವಯ ಪರಿಯಂತೆ,
ವಸ್ತು ನಿರ್ದೇಶದ ಸುಖ ಸಂಭಾಷಣ ದೃಷ್ಟ ಕೊಡು,
ಅಲೇಖನಾದ ಶೂನ್ಯ ಕಲ್ಲಿನಲ್ಲಿದ್ದು,
ಮೆಲ್ಲನೆ ಓ ಎನಲಾಗದೆ?
Art
Manuscript
Music
Courtesy:
Transliteration
Bāhya racaneyindāda bhakti virakti satpatha mārgadiravu,
mātinalliyo, caitan'yātmaka bhāva muṭṭidalliyo?
Ubhayavanaridalli kābavana iravu,
maṭhada dīpa vāyuvina saṅgada kūṭa.
Pāṣāṇadalodagida jyōtiya beḷagu,
vāyuva nītigodaguvude?
Kapaṭada niḥkapaṭada dīpadvaya pariyante,
vastu nirdēśada sukha sambhāṣaṇa dr̥ṣṭa koḍu,
alēkhanāda śūn'ya kallinalliddu,
mellane ō enalāgade?