Index   ವಚನ - 45    Search  
 
ಬಾಯಿಲ್ಲದ ಪಶು ಬತ್ತದ ಹೊಲನ ಹೊಕ್ಕು, ಹುಟ್ಟದ ಸಸಿಯ ಮೆಯ್ದು, ಒಡೆಯನಿಲ್ಲದ ಪರವ ತೊಂಡ ಕೂಡಿದ, ತೊಂಡಿನ ಹಟ್ಟಿಯ ಬಾಗಿಲೊಂದು, ಬೀಗ ಒಂಬತ್ತು. ಮೂರೆಸಳಿನ ಬೀಗ ಮೂರು, ಆರೆಸಳಿನ ಬೀಗ ಮೂರು, ಇಪ್ಪತ್ತೈದೆಸಳಿನ ಬೀಗ ಮೂರು ತೆಗೆವ ಕೈಗೆ ನಾಭಿಯಿಲ್ಲ, ಸಿಕ್ಕಿತ್ತು ಹಸು ಹಟ್ಟಿಯಲ್ಲಿ, ಇನ್ನಾರಿಗೆ ಹೇಳುವೆ? ಅಲೇಖನಾದ ಶೂನ್ಯ ಕಲ್ಲಿನೊಳಗಾದವನ ಬಲ್ಲವರಾರೊ?