Index   ವಚನ - 48    Search  
 
ಭಕ್ತ ಮಾಹೇಶ್ವರ ಪ್ರಸಾದಿ, ಇವು ಮೂರು ಭೃತ್ಯಭಾವ. ಪ್ರಾಣಲಿಂಗಿ ಶರಣ ಐಕ್ಯ, ಇವು ಮೂರು ಕರ್ಕೃಭಾವ. ಭಕ್ತನ ತತ್ತು, ಕುರುಹಿನ ಇಷ್ಟ, ಐಕ್ಯನ ತತ್ತು, ಕುರುಹಿನ ಕಳೆ. ಆ ಕಳೆಯನರಿವುದು ವಿರಕ್ತಿಯ ಭಾವ. ಅದು ನಾಮ ರೂಪು ಭಾವ ನಾಶನ, ಅದು ಬಯಲೊಳಗಿನ ಬೆಳಗು, ಬೆಳಗಿನ ಕಳೆ, ಅಲೇಖನಾದ ಶೂನ್ಯ ಕಲ್ಲಿನ ಹೊರೆ ಬೇಡ.