Index   ವಚನ - 57    Search  
 
ವೇದದಲ್ಲಿ ಕಂಡುದಿಲ್ಲ, ಅದು ಮಾತಿನ ಮನೆಯಾಗಿ ಹೋಯಿತ್ತು. ಹೋಮದಲ್ಲಿ ಕಂಡುದಿಲ್ಲ, ತಿಲ ಘೃತ ಹೋತು ಮೊದಲಾದ ಕಾಷ್ಠ ತೃಣ ದಿಗ್ಬಲಿಗಳನಿಕ್ಕಿ ರೂಪಾದುದಿಲ್ಲ. ಶಾಸ್ತ್ರವ ಕೇಳಿ ಮನ ಸಂತೈಸುವುದಿಲ್ಲ, ಪುರಾಣವನೋದಿ ಪುಣ್ಯನಪುಣ್ಯನ ಕಂಡುದಿಲ್ಲ. ಈತ ಕೊಟ್ಟುದು ಕೈಯಲ್ಲಿ ಹಿಡಿದು, ಕಣ್ಣಿನಲ್ಲಿ ನೋಡಿ, ಮನವರಿಯದಿದೆ. ಇನ್ನೇವೆ? ಇದರನ್ವಯವ ಹೇಳು, ಅಲೇಖನಾದ ಶೂನ್ಯ ಕಲ್ಲಿನೊಳಗಾದವನೆ.