ಶಿವ ಶಿವಾ! ಎಲ್ಲರೂ ಉಂಟಾದುದ ಹೇಳಿ,
ಇಲ್ಲದ ಬಯಲಿಂಗೆ ಮನವನಿಕ್ಕಿದರು.
ಎನಗಿನ್ನಾವುದು ಬಟ್ಟೆ?
ಬಸವಣ್ಣನ ಕರುಣೆಯಿಂದ
ಕಟ್ಟಿದ ಲಿಂಗಕ್ಕೆ ಹುಟ್ಟುಮೆಟ್ಟನರಿಯೆ.
ಕೊಟ್ಟಾತ ಹೇಳಿದುದಿಲ್ಲ, ಕಟ್ಟಿಕೋ ಎಂದಾತ,
ಈ ಬಟ್ಟೆಯಲಿರು ಎಂದುದಿಲ್ಲ.
ಕಡ್ಡಾಯಕ್ಕೆ ಕಟ್ಟಿದ ಈ ಒಡ್ಡಗಲ್ಲಿನ ಮುರಿಯೆ
ಎನಗೊಂದು ಬುದ್ಧಿಯ ಹೇಳಾ.
ಅಲೇಖನಾದ ಶೂನ್ಯ ಕಲ್ಲಿನೊಳಗೆ ಏಕಾದೆಯಯ್ಯಾ.