Index   ವಚನ - 62    Search  
 
ಹಲವು ಧಾನ್ಯವನುಂಡವರ ಸಲಗೆಡದಿದೆ ಅಸು. ಫಲ ರಸಸಾಳಿ ಸುಭಿಕ್ಷವ ಕೊಂಡು ಅಸು ಗೆಲದಿದೆ. ಇಂತೀ ಒಲವರವೇಕೆ ನಿನಗೆ, ಕೆಲವರ ಅಳಿಸಿ, ಕೆಲವರ ನಗಿಸಿ? ಬಲವಂತತನವೆ ನಿನಗಿದು? ಬಲುಹೇಕೆ ಭಕ್ತರೊಳು, ನಿನ್ನಯ ನೆರೆ ನಂಬುವ ಶರಣರೊಳು? ಬಿಡು, ಕಲ್ಲಿನೊಳಗಣ ಮರೆಯ, ತೆರೆಯ ತೆಗೆ. ಅಲೇಖನಾದ ಶೂನ್ಯ, ಸಮಗಂಡಿರು ಎಲ್ಲರುವ.